
ಶಾಲೆಯಲ್ಲಿದ್ದಾಗ, ಗಣಿತ, ಭೌತಶಾಸ್ತ್ರ, ಇತಿಹಾಸದ ಜೊತೆಗೆ ಮೂರು ಭಾಷೆಗಳ ಬಗ್ಗೆ ತುಂಬಾ ಕಲಿತಿದ್ದೇನೆ. ಈ ಪಾಠಗಳು ನನಗೆ ಜಗತ್ತನ್ನು ನೋಡಲು ಮತ್ತು ಜಗತ್ತಿನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿದ್ದು ನಿಜ. ಆದರೆ ನಿತ್ಯ ಜೀವನದಲ್ಲಿ ಇವು ನನಗೆ ಅಷ್ಟೇನೂ ಉಪಯುಕ್ತವಾಗಲಿಲ್ಲ.
ಈ ಸರಳ ಹಣಕಾಸು ಪಾಠಗಳನ್ನು ನಾನು ಶಾಲೆಯಲ್ಲೇ ಕಲಿತಿದ್ದರೆ ಜೀವನದಲ್ಲಿ ತುಂಬಾ ಅನುಕೂಲವಾಗುತ್ತಿತ್ತು. ಅಷ್ಟೇ ಅಲ್ಲ, ಹಲವು ತಪ್ಪುಗಳನ್ನು ಮಾಡದಂತೆಯೂ ನನ್ನನ್ನು ಇದು ತಡೆಯುತ್ತಿತ್ತು. ಈಗಿನ ಸ್ಥಿತಿಗಿಂತಲೂ ನಾನು ಚೆನ್ನಾಗಿಯೇ ಇರುತ್ತಿದ್ದೆ.
1. ಹಣದುಬ್ಬರ ಯಾವಾಗಲೂ ಇರುತ್ತದೆ
ಹಣದುಬ್ಬರ ಎಂದರೆ ನಮ್ಮ ಜೀವನ ಶೈಲಿ ಬದಲಾಗದೇ ಇದ್ದರೂ, ವೆಚ್ಚ ಹೆಚ್ಚುತ್ತಲೇ ಇರುವುದು. ಭಾರತದಲ್ಲಿ ವರ್ಷಕ್ಕೆ ಶೇ. 8 ಕ್ಕಿಂತ ಹೆಚ್ಚು ಹಣದುಬ್ಬರ ಉಂಟಾಗಿರುವುದನ್ನು ನಾವು ನೋಡಿದ್ದೇವೆ. ಸದ್ಯಕ್ಕೆ ಇದು ಶೇ. 4-ಶೇ.5 ರ ಸಮೀಪದಲ್ಲಿದೆ. ಇದೇ ದರ ಒಂದು ದಶಕದವರೆಗೆ ಇದ್ದರೆ ನಮ್ಮ ವಾರ್ಷಿಕ ವೆಚ್ಚ ಶೇ. 50 ರಷ್ಟು ಹೆಚ್ಚಳ ಕಂಡಿರುತ್ತದೆ.
ಹಣದುಬ್ಬರ | 4% | 6% | 8% |
ಪ್ರಸ್ತುತ ವೆಚ್ಚಗಳು | 100 | 100 | 100 |
10 ವರ್ಷಗಳಲ್ಲಿ ವೆಚ್ಚ | 148 | 179 | 216 |
2. ಉಳಿತಾಯ ವರ್ಸಸ್ ಹೂಡಿಕೆ
ವ್ಯಕ್ತಿಯ ಆದಾಯದ ಒಂದು ಭಾಗವನ್ನು ಉಳಿತಾಯ ಎಂದು ಬದಿಗಿಡಬಹುದು. ಈ ಹಣವನ್ನು ನೀವು ಕೆಲವು ಸಾಂಪ್ರದಾಯಿಕ ಸ್ವತ್ತುಗಳಲ್ಲಿ (ಬ್ಯಾಂಕ್ ಎಫ್ಡಿ, ಉಳಿತಾಯ ಬ್ಯಾಂಕ್ ಖಾತೆ ಬ್ಯಾಲೆನ್ಸ್ ಅಥವಾ ವಿಮೆಯ ರೀತಿಯಲ್ಲಿ) ಇಟ್ಟರೆ, ಹಣದುಬ್ಬರವನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಅನುಮಾನವಿದ್ದರೆ, ನಿಮ್ಮ ಬ್ಯಾಂಕರ್ ಬಳಿ, ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಎಂದು ವಿಚಾರಿಸಿ. ಹಣದುಬ್ಬರವನ್ನು ಎದುರಿಸುವ ಸ್ವತ್ತುಗಳಲ್ಲಿ ಮಾತ್ರ ದೀರ್ಘಕಾಲದಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
3. ಹೂಡಿಕೆ ಎಂಬುದು ಸಹನೆಯ ಆಟ
ಕೆಲವರು ತಾವು ಮಾಡಿದ ಗಳಿಕೆ ಮತ್ತು ಎಷ್ಟು ಹಣ ವಾಪಸ್ ಸಿಕ್ಕಿತು ಎಂಬ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವುದನ್ನು ಕೇಳಿರಬಹುದು. ಆದರೆ ಅವರು, ಹಣ ಕಳೆದುಕೊಂಡಾಗ ಅದೇ ರೀತಿ ಹೇಳಿಕೊಳ್ಳುವುದಿಲ್ಲ. ಇಂತಹವರು ಹೇಳುವ ಮಾತುಗಳಿಗೆ ಬಲಿಯಾಗಬೇಡಿ.
ನೆನಪಿಡಿ, ಹೂಡಿಕೆ ಎಂಬುದು ಸಹನೆಯ ಆಟ. ನಿಮ್ಮ ಸಂಪತ್ತನ್ನು ವರ್ಧಿಸಲು ಇದು ಸಮಯ ತೆಗೆದುಕೊಳ್ಳುತ್ತದೆ. ತ್ವರಿತ ಅಥವಾ ಸುಲಭದಲ್ಲಿ ಹಣ ಗಳಿಕೆಯು ಅಲ್ಪಾವಧಿಯಲ್ಲಿ ಕೆಲಸ ಮಾಡಬಹುದು. ಆದರೆ ಅವು ನಿಧಾನಕ್ಕೆ ನಿಮ್ಮನ್ನು ಕೆಟ್ಟ ಸ್ಥಿತಿಗೆ ದೂಡುತ್ತವೆ.
4. ದೇಶದ ಪ್ರಗತಿಯಲ್ಲಿ ಭಾಗಿಯಾಗಿ
ದೇಶದ ಪ್ರಗತಿಯಲ್ಲಿ ಭಾಗವಹಿಸಲು ಸಾಮಾನ್ಯ ಜನರಿಗೆ ಇರುವ ಒಂದು ವಿಧಾನವೆಂದರೆ, ಪ್ರಮುಖ ಕಂಪನಿಗಳ ಷೇರುಗಳನ್ನು ಖರೀದಿ ಮಾಡುವುದು ಮತ್ತು ಆ ಕಂಪನಿಗಳ ಪ್ರಗತಿಯಲ್ಲಿ ಲಾಭ ಪಡೆಯುವುದಾಗಿದೆ. ಪ್ರಮುಖ ಕಂಪನಿಗಳು ಎಂದಿಗೂ ಜಿಡಿಪಿಗೆ ಅನುಗುಣವಾಗಿ ಬೆಳವಣಿಗೆ ಕಾಣುತ್ತವೆ ಮತ್ತು ದೊಡ್ಡ ಅಂತರದಿಂದ ಹಣದುಬ್ಬರವನ್ನು ಎದುರಿಸುತ್ತವೆ.
5. ಮ್ಯೂಚುವಲ್ ಫಂಡ್ಗಳು ಮುಂದುವರಿಯುತ್ತಲೇ ಇರುತ್ತವೆ
ಭಾರತದಲ್ಲಿ ಕೆಲವೇ ವ್ಯಕ್ತಿಗಳ ಸಂಪತ್ತು ಮ್ಯೂಚುವಲ್ ಫಂಡ್ಗಳಲ್ಲಿವೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನರು ತಮ್ಮ ಹೆಚ್ಚಿನ ಪ್ರಮಾಣದ ಉಳಿತಾಯವನ್ನು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಬಳಸುತ್ತಾರೆ. ದೇಶ ಬೆಳೆಯುತ್ತಿದ್ದಂತೆ, ಹೆಚ್ಚು ಜನರ ಹಣವು ಮ್ಯೂಚುವಲ್ ಫಂಡ್ಗಳ ಮೂಲಕ ಹರಿದಾಡುತ್ತದೆ. ಯಾಕೆಂದರೆ ಈ ವಿಧಾನವು ಭಾರತದ ಪ್ರಮುಖ ಕಂಪನಿಗಳ ಪ್ರಗತಿಯಲ್ಲಿ ಭಾಗವಹಿಸಲು ಅತ್ಯಂತ ಕಡಿಮೆ ವೆಚ್ಚದ್ದಾಗಿರುತ್ತದೆ.