
ಬಹುತೇಕರಿಗೆ ತುರ್ತು ನಿಧಿ ಎಂದರೆ ಏನು ಎಂಬುದು ಗೊತ್ತಿದೆ. ಆದಾಯ ನಷ್ಟವಾದರೆ ಅಥವಾ ಅನಿರೀಕ್ಷಿತ, ತುರ್ತು, ಭಾರಿ ವೆಚ್ಚ ಮಾಡಬೇಕಾಗಿ ಬಂದರೆ ಆರು ತಿಂಗಳ ಅಥವಾ ನಾಲ್ಕು ತಿಂಗಳ ಸಂಬಳವನ್ನು ಹೊಂದಿರುವ ಒಂದು ನಿಧಿ.
ತುರ್ತು ನಿಧಿ ಎಂಬುದು ಕೇವಲ ಈಗಷ್ಟೇ ಉದ್ಯೋಗ ಆರಂಭಿಸಿದವರು ಅಥವಾ 20ರಿಂದ 30 ವರ್ಷ ವಯಸ್ಸು ಹೊಂದಿರುವವರು ಅಥವಾ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಅಗತ್ಯವಿದೆ ಎಂದು ತಪ್ಪು ಕೆಲವು ಜನರು ಭಾವಿಸುತ್ತಾರೆ. 40ನೇ ವರ್ಷವಾಗುವವರೆಗೆ ಬಹುತೇಕ ಜನರಿಗೆ ಸ್ಥಿರ ಆದಾಯದ ಮೂಲ ಇರುತ್ತದೆ ಮತ್ತು ಅವರು ತಮ್ಮ ವೆಚ್ಚ ನಿರ್ವಹಣೆ ಮಾಡುವುದರಲ್ಲಿ ಅನುಭವವನ್ನೂ ಹೊಂದಿರುತ್ತಾರೆ.
ವಿಶೇಷವಾಗಿ ಮೆಟ್ರೋ ನಗರಗಳಲ್ಲಿನ 40 ವರ್ಷ ವಯಸ್ಸಿನವರೂ ಕೂಡ ಕೆಲವರು ಹೂಡಿಕೆ ಮಾಡುತ್ತಿರಬಹುದು. ಆದರೆ, ಹಲವು ತುರ್ತು ನಿಧಿ ಅಗತ್ಯವಿಲ್ಲ ಎಂದು ಭಾವಿಸಿ ದೀರ್ಘಕಾಲದ ಹೂಡಿಕೆ ಮಾಡುತ್ತಿರುತ್ತಾರೆ. ನಿಮ್ಮ ಬಳಿ ತುರ್ತು ನಿಧಿ ಇದೆಯೇ ಎಂದು ಪ್ರಶ್ನಿಸಿದರೆ ಹಲವು ಪ್ರಶ್ನಾರ್ಥಕ ಮುಖಭಾವದಲ್ಲಿ ನೋಡುತ್ತಿರುತ್ತಾರೆ!
ನೀವು ತಯಾರಾಗಿರಬಹುದು, ಆದರೆ ನಿಮ್ಮ ತಯಾರಿ ಸಾಕಷ್ಟರ ಮಟ್ಟಿಗೆ ಇದೆಯೇ?
ನೀವು ಒಂದಷ್ಟು ಹೂಡಿಕೆ ಹೊಂದಿದ್ದೀರಿ ಎಂದ ಮಾತ್ರಕ್ಕೆ ತುರ್ತು ಸನ್ನಿವೇಶವನ್ನು ಎದುರಿಸಲು ಸಿದ್ಧರಿದ್ದೀರಿ ಎಂದರ್ಥವಲ್ಲ. ಈವರೆಗೆ ನಮ್ಮ ಜೀವನದಲ್ಲಿ ಋಣಾತ್ಮ ಸನ್ನಿವೇಶವನ್ನು ಎದುರಿಸಿದ್ದರೆ ನಾವು ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವುದೇ ಇಲ್ಲ. ಬಹುತೇಕ ಜನರು ಈಗಿನ ಪರಿಸ್ಥಿತಿಯೇ ಮುಂದುರಿಯುತ್ತದೆ ಅಥವಾ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದೇ ಪ್ಲಾನ್ ಮಾಡುತ್ತಾರೆ.
ಪಾಸಿಟಿವ್ ಆಗಿರುವುದು ಒಳ್ಳೆಯದೇ. ಆದರೆ ಪಾಸಿಟಿವ್ ಆಗಿದ್ದೂ ಸಿದ್ಧವಾಗಿರುವುದು ಉತ್ತಮ. ಇದರಿಂದಾಗಿ ನಿಮ್ಮ ಅನಿರೀಕ್ಷಿತ ಸನ್ನಿವೇಶವನ್ನು ನೀವು ಸುಸ್ಥಿರವಾಗಿ ಎದುರಿಸಬಹುದು.
40ರ ವಯಸ್ಸಿನಲ್ಲಿ ನೀವು ಕುಟುಂಬವನ್ನು ಹೊಂದಿರುತ್ತೇವೆ ಮತ್ತು ಅವಲಂಬಿತರೂ ಇರುತ್ತಾರೆ. ನೀವು ಹೋಮ್ ಲೋನ್ ಅನ್ನೂ ಬಹುಶಃ ಹೊಂದಿರಬಹುದು. ನಿಮ್ಮ 20 ಹಾಗೂ 30ನೇ ವಯಸ್ಸಿನಲ್ಲಿ ಇದ್ದುದಕ್ಕಿಂತ ವೆಚ್ಚ ಭಾರಿ ಹೆಚ್ಚಾಗಿರುತ್ತದೆ.
ನಿಮ್ಮ ಆದಾಯವೂ ಹೆಚ್ಚಿರುವುದರಿಂದ ನಿಮ್ಮ ವೆಚ್ಚ ಹೆಚ್ಚಳವಾಗಿರುವುದನ್ನು ನೀವು ಗಮನಿಸಿರುವುದೇ ಇಲ್ಲ. 40 ರ ವಯಸ್ಸಿನಲ್ಲಿ ನೀವು ನಾಯಕತ್ವ ಅಥವಾ ಆಡಳಿತ ಹುದ್ದೆಯಲ್ಲಿ ಇರುತ್ತೀರಿ. ಆರಂಭಿಕ ವರ್ಷಕ್ಕೆ ಹೋಲಿಸಿದರೆ ಉತ್ತಮ ಗಳಿಕೆ ಮಾಡುತ್ತಿರುತ್ತೀರಿ. ಈ ವೇಳೆ ನಾವು ಗಳಿಸುತ್ತಿರುವ ಸಂಬಳ ಮುಂದೊಂದು ದಿನ ಇಲ್ಲವಾಗಬಹುದು ಎಂಬ ಸನ್ನಿವೇಶವನ್ನು ಊಹಿಸದಂತೆ ನಮ್ಮನ್ನು ಕುರುಡಾಗಿಸಿರುತ್ತದೆ.
ನಿಮ್ಮ ಅಧಿಕ ವೆಚ್ಚ ಏನನ್ನು ಸೂಚಿಸುತ್ತದೆ?
ಯಾರೂ ತಮ್ಮ ಜೀವನವನ್ನು ಆರ್ಥಿಕವಾಗಿಯಾಗಲೀ ಅಥವಾ ಯಾವುದೇ ಇತರ ರೀತಿಯಲ್ಲಾಗಲೀ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. 50 ಅಥವಾ 50 ವರ್ಷದ ಆಸುಪಾಸಿನಲ್ಲಿರುವವರ ವೆಚ್ಚ ಅತ್ಯಂತ ಹೆಚ್ಚಿರುತ್ತದೆ. ಹೀಗಾಗಿ 20 ಅಥವಾ 30ರ ವಯಸ್ಸಿನಲ್ಲಿದ್ದಾಗಿನದ್ದಕ್ಕಿಂತ ತುರ್ತು ನಿಧಿ ಹೆಚ್ಚಿನ ಮೊತ್ತದಲ್ಲಿ ಇರಬೇಕು.
20 ಅಥವಾ 30ನೇ ವಯಸ್ಸಿನಲ್ಲಿ ನೀವು ಐಷಾರಾಮಿ ಜೀವನ ಅನುಭವಿಸುತ್ತಿರಬಹುದು. ಈ ವಯಸ್ಸಿನಲ್ಲಿ ಉದ್ಯೋಗ ಕಳೆದುಕೊಂಡರೆ ಮತ್ತೆ 3-4 ತಿಂಗಳಲ್ಲಿ ಹೊಸ ಕೆಲಸ ಹುಡುಕಿಕೊಳ್ಳಬಹುದು. ಆದರೆ ವಯಸ್ಸಾದ ಮೇಲೆ ಹೀಗೆ ಆಗುವುದಿಲ್ಲ. ನಿಮ್ಮ ಹಂತದಲ್ಲಿ ಉದ್ಯೋಗ ಕಳೆದುಕೊಂಡರೆ ಇನ್ನೊಂದು ಉದ್ಯೋಗ ಸುಲಭದಲ್ಲಿ ಸಿಗುವುದಿಲ್ಲ. ನಿಮ್ಮ ಜವಾಬ್ದಾರಿ ಹೆಚ್ಚಿರುತ್ತದೆ ಮತ್ತು ಈಗ ನೀವು ಇದನ್ನು ಗಂಭೀರವಾಗಿಯೂ ಪರಿಗಣಿಸುತ್ತೀರಿ.
ಪ್ರತಿ ತಿಂಗಳ ನೂವು ಮಾಡಬೇಕಾದ ಹೂಡಿಕೆಯೂ ಸೇರಿದಂತೆ ಹೆಚ್ಚು ವೆಚ್ಚ ಮತ್ತು ಹೆಚ್ಚು ಜವಾಬ್ದಾರಿ ಇದ್ದಾಗ, ಇವುಗಳನ್ನು ನಿರ್ವಹಿಸಲು ನೀವು ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ.
ನೀವು ಏನು ಮಾಡಬೇಕು?
ಸ್ವಲ್ಪ ಹೂಡಿಕೆಯನ್ನು ಲಿಕ್ವಿಡ್ ಫಂಡ್ ಅಥವಾ ಬ್ಯಾಂಕ್ ಖಾತೆಯಲ್ಲೂ ಹಾಕಿಕೊಳ್ಳುವುದು ಅತ್ಯಂತ ಸ್ಮಾರ್ಟ್ ಮತ್ತು ಸುಲಭವಾದ ಸಂಗತಿಯಾಗಿದೆ. ಇದು ಕನಿಷ್ಠ ನಿಮ್ಮ ಆರು ತಿಂಗಳ ವೆಚ್ಚದ ಹಣವಾಗಿರಬೇಕು ಅಥವಾ ನಿಮ್ಮ ಸನ್ನಿವೇಶಕ್ಕೆ ಸೂಕ್ತ ಎನಿಸುವಷ್ಟಾದರೂ ಆಗಿರಬೇಕು. ನಿಮ್ಮ ಕುಟುಂಬ ಮತ್ತು ನಿಮಗೆ ಆರೋಗ್ಯ ವಿಮೆ ಯೋಜನೆಯನ್ನೂ ಖರೀದಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ವೆಚ್ಚ ಹೆಚ್ಚಿದಂತೆ ನಿಮ್ಮ ತುರ್ತು ನಿಧಿಯನ್ನೂ ಹೆಚ್ಚಿಸಿ. ಇದು ಲಿಕ್ವಿಡ್ ರೂಪದಲ್ಲಿ (ಲಿಕ್ವಿಡ್ ಫಂಡ್ ಅಥವಾ ಬ್ಯಾಂಕ್ ಖಾತೆ) ಆರು ತಿಂಗಳ ನಿಮ್ಮ ವೆಚ್ಚಗಳನ್ನು (ನಿಮ್ಮ ಸಂಭಾವ್ಯ ವೆಚ್ಚಗಳು ನಿಮಗೆ ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಮಾರ್ಕೆಟ್ನಲ್ಲಿ ನಿಮ್ಮ ಹುದ್ದೆಗೆ ಬೇಡಿಕೆ ಕಡಿಮೆ ಇದ್ದರೆ) ಹೊಂದಿರಬೇಕು. ತಯಾರಿ ಉತ್ತಮವಾಗಿದ್ದರೆ