ಹಲವು ವರ್ಷಗಳ ನಂತರ ನೀವು ಒಂದು ಲಕ್ಷ ರೂ. ಉಳಿಸಿದ್ದೀರಿ ಎಂದಾದರೆ, ನಿಮಗೆ ಅಭಿನಂದನೆಗಳು!

ಆದರೆ ನಿಮ್ಮ ಆರ್‌ಡಿ ಅಥವಾ ಬ್ಯಾಂಕ್‌ ಖಾತೆಯಲ್ಲಿರುವ ಈ ಹಣದಿಂದ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಿ ? ಅಲ್ಲೇ ಅದನ್ನು ಬಿಡುತ್ತೀರಾ ಅಥವಾ ಅದರಿಂದ ಏನನ್ನಾದರೂ ಮಾಡಲು ಬಯಸುತ್ತೀರಾ?

ಆ ಒಂದು ಲಕ್ಷದ ಬಗ್ಗೆ  ನಿರ್ಧಾರ ಕೈಗೊಳ್ಳುವ ಮೊದಲು ಈ 3 ಪ್ರಮುಖ ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಳ್ಳಿ:

1. ಕೆಲವು ತಿಂಗಳುಗಳವರೆಗೆ ಆದಾಯ ಇಲ್ಲದೇ ಇದ್ದರೂ ಬಳಸಲು ನಿಮ್ಮ ಬಳಿ ಸಾಕಷ್ಟು ಹಣವಿದೆಯೇ?
ಇಲ್ಲವಾದರೆ, ಆ ಹಣವನ್ನು ಆರ್‌ಡಿಯಲ್ಲಿ ಅಥವಾ ಉಳಿತಾಯ ಬ್ಯಾಂಕ್‌ ಖಾತೆಯಲ್ಲೇ ಬಿಡುವುದು ಅಥವಾ ಎಫ್‌ಡಿ ಅಥವಾ ಡೆಟ್‌ ಫಂಡ್‌ಗೆ ಅದನ್ನು ವರ್ಗಾಯಿಸುವುದು ಒಳ್ಳೆಯದು. ಈ ಹಣವು ನಿಮ್ಮ ವೈಯಕ್ತಿಕ ತುರ್ತು ನಿಧಿಯ ರೂಪದಲ್ಲಿ ನಿಮ್ಮ ಅನಿರೀಕ್ಷಿತ ಸನ್ನಿವೇಶ ನಿರ್ವಹಣೆಗೆ ಉತ್ತಮ ಮೊತ್ತವಾದೀತು.

ನೀವು ಈಗಾಗಲೇ ತುರ್ತು ನಿಧಿಯನ್ನು ಹೊಂದಿದ್ದರೆ, ನಿಮಗೆ ಮತ್ತೊಮ್ಮೆ ಅಭಿನಂದನೆಗಳು! ನೀವು ನಿಮ್ಮ ಹಣಕಾಸು ಯೋಜನೆಯಲ್ಲಿ ಒಂದು ಹೆಜ್ಜೆ ಮುಂದಿದ್ದೀರಿ. ಈಗ ನೀವು ಮುಂದಿನ ಪ್ರಶ್ನೆಗೆ ತೆರಳಬಹುದು.

2. ಮುಂದಿನ 1-5 ವರ್ಷಗಳಲ್ಲಿ ನಿಮಗೆ ತುಂಬಾ ವೆಚ್ಚ ಎದುರಾಗುವ ಸಾಧ್ಯತೆ ಇದೆಯೇ? ಇದಕ್ಕಾಗಿ ನೀವು ನಿಮ್ಮ ಉಳಿತಾಯವನ್ನು ಯೋಜನೆ ಮಾಡಿದ್ದೀರಾ?
ನೀವು ತುರ್ತು ನಿಧಿ ಹೊಂದಿದ್ದು, ನೀವು ನಿಮ್ಮ ಉಳಿತಾಯವನ್ನು ಯೋಜನೆ ಮಾಡಿಲ್ಲದಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ವಿದೇಶ ರಜಾ ಪ್ರವಾಸದಂತಹ ದೊಡ್ಡ ಖರೀದಿ ಉಳಿತಾಯ ಮಾಡಿಲ್ಲದಿದ್ದರೆ, ಅಂತಹ ಯೋಜನೆಗೆ ಈ ಹಣವನ್ನು ಬಳಸಿ. ವೆಚ್ಚ ಮಾಡುವವರೆಗೆ ಈ ಹಣವನ್ನು ಡೆಟ್‌ ಫಂಡ್‌ನಲ್ಲಿ ಇಡಿ. ನಿಮ್ಮ ಹಣ ನಿರ್ದಿಷ್ಟ ದರದಲ್ಲಿ ಹೆಚ್ಚುತ್ತಿರುತ್ತದೆ ಮತ್ತು ನಿಮಗೆ ಸ್ವಲ್ಪ ಹೆಚ್ಚು ಹಣವೂ ಸಿಕ್ಕಂತಾಗುತ್ತದೆ.

ಒಂದು ವೇಳೆ ನೀವು ತುರ್ತು ನಿಧಿ ಹೊಂದಿದ್ದು, ದೊಡ್ಡ ಮಟ್ಟದ ಖರೀದಿಗೂ ನೀವು ಯೋಜನೆ ರೂಪಿಸಿದ್ದರೆ ನಿಮಗೆ ನಮ್ಮ ಸಲಾಂ! ನೀವು ನಿಮ್ಮ ಯೋಜನೆಯಲ್ಲಿ ಒಂದು ಮೈಲು ಮುಂದಿದ್ದೀರಿ ಮತ್ತು ಮೂರನೇ ಪ್ರಶ್ನೆಗೆ ತೆರಳಲು ಈಗ ನೀವು ಅರ್ಹರಾಗಿದ್ದೀರಿ.

3. ನೀವು ಭವಿಷ್ಯದ ಬಗ್ಗೆ ಯೋಚಿಸಿದ್ದೀರಿ? ನಿಮ್ಮ ದೀರ್ಘಕಾಲದ ಗುರಿಗಳಿಗೆ ಉಳಿತಾಯ ಮಾಡಿದ್ದೀರಿ?
ಭವಿಷ್ಯ ಎಂದರೆ 20-30 ವರ್ಷಗಳಿಗೆ ಊಹಿಸುವುದು ಹಾಗೂ ಉಳಿತಾಯ ಮಾಡುವುದು ಕಷ್ಟ ಎಂದು ನಮಗೆ ಗೊತ್ತು. ಆದರೆ, ನಿಮ್ಮ ತುರ್ತು ನಿಧಿ ಮತ್ತು ಅಲ್ಪಾವಧಿ ಅಗತ್ಯ ಪೂರೈಸಿದ್ದರೆ, ಆಗ ನಿಮ್ಮ ಹೆಚ್ಚುವರಿ ಒಂದು ಲಕ್ಷವನ್ನು ದೀರ್ಘಾವಧಿಗೆ ಹೂಡಿಕೆ ಮಾಡುವುದು ಉತ್ತಮ ಐಡಿಯಾ.

ಹೀಗಾಗಿ ಉತ್ತಮ ಈಕ್ವಿಟಿ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿ ಮತ್ತು ಏಳು ವರ್ಷ ಅಥವಾ ಹೆಚ್ಚಿನ ಅವಧಿಗೆ ಬೆಳೆಯಲು ಬಿಡಿ. ನೀವು ನಿವೃತ್ತರಾಗುವ ವೇಳೆಗೆ ಆ ಒಂದು ಲಕ್ಷ ದೊಡ್ಡ ಮೊತ್ತವಾಗಬಹುದು.

ನೀವು ತುರ್ತು ನಿಧಿಯನ್ನೂ ಹೊಂದಿದ್ದು, ಮುಂದಿನ ಐದು ವರ್ಷಗಳವರೆಗಿನ ವೆಚ್ಚವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಗೆ ನಿವೃತ್ತಿಗೆ ಹಣವನ್ನೂ ಉಳಿಸಿದ್ದೀರಿ ಎಂದಾದರೆ ನೀವು ಉತ್ತಮ ಸ್ಥಿತಿಯಲ್ಲಿದ್ದೀರಿ ಎಂದರ್ಥ. ನಿಮ್ಮ ವೈಯಕ್ತಿಕ ಹಣಕಾಸು ಆಟದಲ್ಲಿ ನೀವು ಮೊದಲ ಸ್ಥಾನದಲ್ಲಿರುವುದಕ್ಕೆ ನಿಮ್ಮನ್ನು ನಾವು ಅಭಿನಂದಿಸುತ್ತೇವೆ ಮತ್ತು ನೀವು ಅನುಕೂಲಕರ ಸ್ಥಿತಿಯಲ್ಲಿ ಜೀವನ ಕಳೆಯುತ್ತೀರಿ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ.

ಹಾಗಾದರೆ ಒಂದು ಲಕ್ಷವನ್ನು ಇಟ್ಟುಕೊಂಡು ಏನು ಮಾಡಬೇಕು? ನೀವು ಏನನ್ನು ಬೇಕಾದರೂ ಮಾಡಬಹುದು. ಯಾಕೆಂದರೆ ನೀವು ಅದನ್ನು ನಿರ್ವವಹಿಸುವ ಹಕ್ಕು ಹೊಂದಿರುತ್ತೀರಿ!