Skip to main content
Scripbox Logo

ನಿಮ್ಮ ಸಾಮರ್ಥ್ಯಕ್ಕಿಂತ ನಿಮ್ಮ ಜೀವನ ಶೈಲಿ ವೆಚ್ಚದಾಯಕವಾದ ಬಗ್ಗೆ ನಾಲ್ಕು ಮುನ್ಸೂಚನೆಗಳು

ಸ್ಪೋರ್ಟ್‌ ಸ್ಟಾರ್‌ಗಳು, ಸಂಗೀತಗಾರರು, ಸಿನಿಮಾ ತಾರೆಯರು ಮತ್ತು ಅಪರಾಧ ಜಗತ್ತಿನ ಡಾನ್‌ಗಳು ಹೇಳುವಂತೆ, ನಮ್ಮ ಆದಾಯವು ನಮ್ಮ ಜೀವನಶೈಲಿಗೆ ಯಾವ ರಕ್ಷಣೆಯನ್ನೂ ಒದಗಿಸುವುದಿಲ್ಲ.

ನೆಟ್‌ಫ್ಲಿಕ್ಸ್‌ನಲ್ಲಿನ ನಾರ್ಕೋಸ್‌ ಸರಣಿಯನ್ನು ನಾವೆಲ್ಲರೂ ಮೆಚ್ಚಿಕೊಂಡಿದ್ದೇವೆ. ಅದರಲ್ಲೂ ಮೊದಲ ಎರಡು ಸೀಸ್‌ನ್‌ಗಳನ್ನು ನಾವು ಕುತೂಹಲದಿಂದ ನೋಡಿದ್ದೇವೆ. ಪಾಬ್ಲೋ ಎಸ್ಕೋಬಾರ್‌ ಮಾದರಿ ನಾಗರಿಕನೇನೂ ಅಲ್ಲ, ಆದರೆ ಆತ ಕೆಟ್ಟ ದಾರಿಯಲ್ಲಿ ಕೋಟ್ಯಂತರ ಹಣವನ್ನು ಗಳಿಸಿದ್ದಾನೆ. ಆತನ ಜೀವನಶೈಲಿಗೆ ನಾವೆಲ್ಲ ಬೆರಗಾಗಿದ್ದೇವೆ. ಖಾಸಗಿ ರೇಸ್‌ ಟ್ರ್ಯಾಕ್ ಅಥವಾ ಬಯಸಿದ ಸ್ಥಳದಲ್ಲಿ ಪಾರ್ಟಿ ಮಾಡುವುದು ಯಾರಿಗೆ ಬೇಡ ಹೇಳಿ? ಅದ್ಭುತ ಸಂಪತ್ತು ಆಕರ್ಷಕವೂ ಹೌದು.

ಸಂಪತ್ತು ಹೆಚ್ಚಿಸಿಕೊಳ್ಳುವ ಎರಡು ಅದ್ಭುತ ವಿಧಾನವೆಂದರೆ ನಾಟಕೀಐವಾಗಿ ನಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅಥವಾ ನಮಗೆ ಗಳಿಕೆ ಮಾಡಿಕೊಡುವ ಸ್ವತ್ತುಗಳಲ್ಲಿ ಹೂಡಿಕೆ ಮಾಡುವುದು. ಈ ಎರಡನೇ ವಿಧಾನದಲ್ಲಿ ನಮ್ಮ ಸಂಬಳದಿಂದ ಉಳಿತಾಯ ಮಾಡಿ ದೀರ್ಘಕಾಲಕ್ಕಾಗಿ ಉಳಿಸಬಹುದು. ಈ ಎರಡೂ ವಿಧಾನವೂ ನಮ್ಮ ಸ್ವತ್ತಿನ ಮೇಲಿನ ಗಳಿಕೆ ಅಥವಾ ರಿಟರ್ನ್ಸ್‌ ಅನ್ನು ಕೊಡುತ್ತದೆ. ಒಂದು ಅತ್ಯಂತ ಆಕರ್ಷಕ ಎನಿಸಿದರೆ, ಇನ್ನೊಂದು ಬೇಸರದ ಸಂಗತಿ.

ಆದರೆ ಸ್ಪೋರ್ಟ್‌ ಸ್ಟಾರ್‌ಗಳು, ಸಂಗೀತಗಾರರು, ಸಿನಿಮಾ ತಾರೆಯರು ಮತ್ತು ಅಪರಾಧ ಜಗತ್ತಿನ ಡಾನ್‌ಗಳು ಹೇಳುವಂತೆ, ನಮ್ಮ ಆದಾಯವು ನಮ್ಮ ಜೀವನಶೈಲಿಗೆ ಯಾವ ರಕ್ಷಣೆಯನ್ನೂ ಒದಗಿಸುವುದಿಲ್ಲ. ನಿಮ್ಮ ಜೊತೆಯವರಿಗಿಂತ ನೀವು ಹೆಚ್ಚು ಆದಾಯವನ್ನು ಗಳಿಸುತ್ತೀರಿ, ನಿಮ್ಮ ಹಣಕ್ಕಿಂತ ಹೆಚ್ಚು ನಿಮ್ಮ ಜೀವನ ಶೈಲಿ ಐಷಾರಾಮಿಯಾಗಿರುತ್ತದೆಯೋ ಎಂಬುದನ್ನು ಈ ಸಂಪತ್ತು ಪರಿಗಣಿಸುವುದಿಲ್ಲ. ನಾವು ಸಾಮಾನ್ಯವಾಗಿ ಸಂಪತ್ತು ಗಳಿಕೆಯಲ್ಲಿ ಮಾಡುವ ನಾಲ್ಕು ತಪ್ಪುಗಳು ಇಲ್ಲಿವೆ-

1. ನಮ್ಮ ಮಾಸಿಕ ಆದಾಯದ ಕನಿಷ್ಠ ಶೇ. 50 ರಷ್ಟು ಆಗಿರುವ ಹಠಾತ್ ವೆಚ್ಚಕ್ಕೆ ಸಾಕಷ್ಟು ನಗದು ಇಲ್ಲದ ಸನ್ನಿವೇಶ.
ನಿಮ್ಮ ಆದಾಯ ಹೆಚ್ಚು ಇದ್ದೂ, ನೀವು ಎಲ್ಲವನ್ನೂ ವೆಚ್ಚ ಮಾಡುತ್ತಿದ್ದೀರಿ ಎಂದರೆ ಅದು ಅಪಾಯಕಾರಿ ಸಂಗತಿಯಾಗಿರುತ್ತದೆ. ಇದನ್ನು ಪರಿಶೀಲಿಸುವ ಒಂದು ತ್ವರಿತ ವಿಧಾನವೆಂದರೆ, ಸಾಲ ಅಥವಾ ಕ್ರೆಡಿಟ್ ಕಾರ್ಡ್‌ ಅನ್ನು ಬಳಸದೇ ನಿಮ್ಮ ಮಾಸಿಕ ಆದಾಯದ ಶೇ. 50 ರಷ್ಟು ಅಥವಾ ಹೆಚ್ಚಿನ ಮೊತ್ತವನ್ನು ಬಳಸಿ ಏನನ್ನಾದರೂ ಖರೀದಿಸಲು ಸಾಧ್ಯವೇ ಎಂದು ನೋಡುವುದಾಗಿದೆ.

ಆದರೆ ಮೆಟ್ರೋದಲ್ಲಿ ಇದಕ್ಕೆ ಅಪವಾದಗಳಿರಬಹುದು. ಯಾಕೆಂದರೆ ನಗರದಲ್ಲಿ ಬಾಡಿಗೆ ಹೆಚ್ಚಳ ಮತ್ತು ಪ್ರಯಾಣ ವೆಚ್ಚ ಹೆಚ್ಚಳ ಇರುವುದರಿಂದ ತಿಂಗಳ ಆದಾಯಕ್ಕೆ ಸಮಾನವಾದ ವೆಚ್ಚವನ್ನೂ ಬಹುತೇಕ ಭಾರತೀಯರು ಮಾಡುತ್ತಿದ್ದಾರೆ.

2. ನಿಮ್ಮ ನಗದು ಹರಿವು ತಿಂಗಳಿಂದ ತಿಂಗಳಿಗೆ ಕಡಿಮೆಯಾಗುತ್ತಿದ್ದರೆ ಅಥವಾ ಆರೋಗ್ಯದಂತಹ ವಿಷಯಗಳಿಗೆ ವರ್ಷದಲ್ಲಿ ಮೂರಕ್ಕೂ ಹೆಚ್ಚು ತಿಂಗಳಿಗೆ ನಿಮ್ಮ ಉಳಿತಾಯದ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೆ
ಪ್ರತಿ ತಿಂಗಳೂ ವೆಚ್ಚದ ನಂತರ ಉಳಿಯುವ ಮೊತ್ತವು ಹೆಚ್ಚುವುದರ ಬದಲಿಗೆ ಕಡಿಮೆಯಾಗುತ್ತಿದ್ದರೆ, ಸುರಕ್ಷಿತ ಪ್ರಮಾಣಕ್ಕಿಂತ ಹೆಚ್ಚನ್ನು ವೆಚ್ಚ ಮಾಡುತ್ತಿದ್ದೀರಿ ಎಂಬುದರ ಲಕ್ಷಣವಾಗಿರುತ್ತದೆ. ಉತ್ತಮ ವಿಧಾನವೆಂದರೆ ನಿಮ್ಮ ಆದಾಯದ ಶೇ. 30 ರಷ್ಟನ್ನು ಉಳಿಸುವುದಾಗಿದೆ. ಅಂದರೆ, ನಿಮ್ಮ ಆದಾಯದ ಶೇ. 70 ಕ್ಕಿಂತ ಹೆಚ್ಚನ್ನು ನೀವು ವೆಚ್ಚ ಮಾಡಬಾರದು.

ನೀವು ಇಷ್ಟನ್ನು ಉಳಿಸಲಾಗದಿದ್ದರೆ ಅಥವಾ 20% ರಷ್ಟನ್ನು ಉಳಿಸಲಾಗದಿದ್ದರೆ ಹಾಗೂ ಇದನ್ನು ಮೂರು ತಿಂಗಳವರೆಗೂ ಮಾಡಲಾಗದಿದ್ದರೆ, ನಿಮ್ಮ ವೆಚ್ಚವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ ವಿಧಾನ. ಸಂತೃಪ್ತಿಯಲ್ಲಿ ರಾಜಿ ಮಾಡಿಕೊಳ್ಳುವ ಸಂಗತಿ ಇದಲ್ಲ. ಬದಲಿಗೆ ನಿಮ್ಮ ಹಣಕಾಸು ಸುರಕ್ಷತೆ ಮತ್ತು ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಇರುವುದು.

ಕ್ರೆಡಿಟ್‌ ಕಾರ್ಡ್‌ ಬಿಲ್ ಮೊತ್ತ ಹೆಚ್ಚುತ್ತಿದ್ದರೆ, ನಿಮ್ಮ ವೆಚ್ಚಕ್ಕೆ ಸೂಕ್ತ ಆದಾಯ ಇಲ್ಲ ಎಂಬುದನ್ನು ಸೂಚಿಸಿದಂತಾಗುತ್ತದೆ.

3. ತಿಂಗಳಿಂದ ತಿಂಗಳಿಗೆ ನಿಮ್ಮ ಕ್ರೆಡಿಟ್ ಕಾರ್ಡ್‌ ಬಿಲ್‌ ಮೊತ್ತ ಕಡಿಮೆಯಾಗದೇ ಹೆಚ್ಚುತ್ತಿದ್ದರೆ
ಕ್ರೆಡಿಟ್‌ ಕಾರ್ಡ್‌ ಬಿಲ್ ಮೊತ್ತ ಹೆಚ್ಚುತ್ತಿದ್ದರೆ, ನಿಮ್ಮ ವೆಚ್ಚಕ್ಕೆ ಸೂಕ್ತ ಆದಾಯ ಇಲ್ಲ ಎಂಬುದನ್ನು ಸೂಚಿಸಿದಂತಾಗುತ್ತದೆ. ಎಲ್ಲವನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ, ತಿಂಗಳದ ಕೊನೆಯಲ್ಲಿ ಎಲ್ಲ ಮೊತ್ತವನ್ನೂ ಒಟ್ಟಿಗೆ ಪಾವತಿ ಮಾಡುವ ವಿಧಾನವನ್ನು ನೀವು ಅಳವಡಿಸಿಕೊಂಡಿರಬಹುದು. ಇದೇನೂ ಸಮಸ್ಯೆಯ ಸಂಗತಿಯಲ್ಲ. ಆದರೆ ನಿಮ್ಮ ಆದಾಯ ಕಡಿಮೆಯಾಗುತ್ತಿದ್ದರೂ, ನಿಮ್ಮ ಕ್ರೆಡಿಟ್ ಕಾರ್ಡ್‌ ಬಿಲ್‌ ಮೊತ್ತ ಹೆಚ್ಚುತ್ತಿದೆ ಎಂದಾದರೆ, ನಿಮ್ಮ ವೆಚ್ಚಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಬೇಕು.
4. ನಿಮ್ಮ ನಿವ್ವಳ ಸಂಬಳಕ್ಕಿಂತ ನಿಮ್ಮ ಸಾಲ ಬಾಧ್ಯತೆಗಳು (ಇಎಂಐಗಳು) ಶೇ. 50 ಕ್ಕಿಂತ ಹೆಚ್ಚಿದ್ದರೆ
ನೀವು ನಿಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಇಎಂಐಗೆ ಪಾವತಿ ಮಾಡುತ್ತಿದ್ದರೆ, ನೀವು ಸುರಕ್ಷಿತ ಮಿತಿಗಿಂತ ಹೆಚ್ಚಿದ್ದೀರಿ ಎಂದರ್ಥ. ನಿಮ್ಮ ಮನೆಗೆ ನೀವು ಸಾಲ ಮಾಡಿರಬಹುದು. ಆದರೆ ತುರ್ತು ಸ್ಥಿತಿಗೆ ಸಾಕಷ್ಟು ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳದಿದ್ದರೆ, ನೀವು ಅಪಾಯದ ಅಂಚಿನಲ್ಲಿದ್ದೀರಿ ಎಂದರ್ಥ. ಸಾಧ್ಯವಾದಷ್ಟೂ ತುರ್ತು ನಿಧಿಯನ್ನು ಸಂಗ್ರಹಿಸಿಕೊಳ್ಳಿ.

ಈ ಚಿಹ್ನೆಗಳನ್ನು ಗುರುತಿಸಿ ಕ್ರಮ ತೆಗೆದುಕೊಂಡರೆ, ಆರ್ಥಿಕವಾಗಿ ಮತ್ತು ಜೀವನ ಮಟ್ಟದ ವಿಚಾರದಲ್ಲಿ ಭಾರಿ ಆಘಾತವನ್ನು ತಡೆಯಬಹುದು.

Achieve all your financial goals with Scripbox. Start Now